
12th December 2024
ಪಂಚಮಸಾಲಿ ಸಮಾಜ ೨ ಎ ಮೀಸಲಾತಿ ಹೋರಾಟ; ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆಯಾಚಿಸಬೇಕು-ಶಾಸಕ ಜನಾರ್ಧನರೆಡ್ಡಿ
ಬಳ್ಳಾರಿ ಡಿ 12. ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜ ೨ ಎ ಮೀಸಲಾತಿಗಾಗಿ ನಡೆಸುತ್ತಿದ್ದ ಶಾಂತಿಯುತ ಹೋರಾಟದಲ್ಲಿ ಪಾಲ್ಗೊಂಡ ಜನತೆ ಮೇಲೆ ಬ್ರಿಟೀಷರ ಆಡಳಿತಕ್ಕೂ ಕೆಟ್ಟದಾಗಿ ಹಿರಿಯರು ಕಿರಿಯರು ಯನ್ನದೇ ಲಾಟಿಯಿಂದ ಇಚ್ಚೆ ಬಂದAತೆ ಹಲ್ಲೆ ಮಾಡಲಾಗಿದೆ. ಈ ಸರಕಾರ ಜನ ವಿರೋಧಿಯಾಗಿದೆ ಎಂದು ಮಾಜಿ ಸಚಿವ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಆರೋಪಿಸಿದ್ದಾರೆ. ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಹೋರಾಟಗಾರರಿಗೆ ಸಮಾಧಾನ ಹೇಳುವುದು ಬಿಟ್ಟು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಾವು ಕರೆದರೆ ಜಯ ಮೃತ್ಯುಂಜಯ ಸ್ವಾಮಿಗಳು ಬಂದಿಲ್ಲ ವೆಂದು ಅವರನ್ನು ಮತ್ತು ಹೋರಾಟಕ್ಕೆ ಮುಂದಾಗಿದ್ದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ. ಸಿ ಪಾಟೀಲ್, ಅರವಿಂದ ಬೆಲ್ಲದ್ ಮೊದಲಾದವರನ್ನು ಬಂಧನದಲ್ಲಿರಿಸಲಾಯಿತು ಎಂದು, ಶ್ಯಾಡಿಸ್ಟ್ ಎಡಿಜಿ ಅವರಿಗೆ ಮಾರ್ಗದರ್ಶನ ನೀಡಿ ಹೋರಾಟಗಾರರ ಮೇಲೆ ಈ ಹಲ್ಲೆ ನಡೆಸಿದ್ದಾರೆ ಎಂದು, ಇದರಲ್ಲಿ ೫೦ ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು. ಇನ್ನುಮುಂದೆ ಯಾರು ಈ ರೀತಿ ಹೋರಾಟಕ್ಕೆ ಬರಬಾರದೆನ್ನುವ ಎನ್ನುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದರು. ಈ ಹೋರಾಟಕ್ಕೆ ಸಿಎಂ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ಈ ಹೋರಾಟ ಇನ್ನೂ ತೀವ್ರಗೊಳ್ಳಲಿದೆ. ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸಫಲವಾಗಲ್ಲ. ಮುಖ್ಯ ಮಂತ್ರಿಗಳು ಬಹಿರಂಗವಾಹಿ ಕ್ಷಮೆ ಕೇಳಿ , ಸಾಂತ್ವನ ಹೇಳಬೇಕೆಂದರು. ನಮ್ಮ ಪಕ್ಷ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ಹೋರಾಟಕ್ಕೆ ಸದಾ ಬೆಂಬಲವಾಗಿರಲಿದೆAದರು.
ಹನುಮಮಾಲೆ ಧರಿಸಿ ಬರುವ ವ್ಯಕ್ತಿಗಳಿಗೆ ಮೂರು ದಿನಗಳ ಕಾಲ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಅಂಜನಾದ್ರಿ ಬೆಟ್ಟಕ್ಜೆ ಭೇಟಿ ನೀಡುವ ಭಕ್ತಾಧಿಗಳಿಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.ಡಿ.೧೩ ರಂದು ಗಂಗಾವತಿಯಲ್ಲಿ ಸಂಕೀರ್ತನ ಱ್ಯಾಲಿ ನಡೆಯಲಿದೆ ಇದಕ್ಕೆ ಅನುಮತಿಯಿದ್ದು ೩೦ ಸಾವಿರ ಜನತೆ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು. ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಜನ ಸೇರಲಿದ್ದಾರೆಂದರು. ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮುಖಂಡರುಗಳಾದ ಡಾ.ಎಸ್.ಜೆ.ವಿ.ಮಹಿಪಾಲ್, ಡಾ.ಬಿ.ಕೆ.ಸುಂದರ್, ಕೆ.ಆರ್.ಮಲ್ಲೇಶ್, ಅಡವಿ ಸ್ವಾಮಿ, ಶರಣ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.